ಮೋಹನ್ ರಂಗ ರಾವ್ | ಕನ್ನಡಕ್ಕೆ : ಡಾ ಸಿ ನಾಗಣ್ಣ
ಲೇಖಕರ ನುಡಿ
ಹಿಮಾಲಯದಲ್ಲಿ ಚಾರಣ ನನಗೆ ಹೊಸದೇನಲ್ಲ; ಆದರೆ ಕೈಲಾಸದಂಥ ಉತ್ಕಟ ಅನುಭವ ನನಗೆ ಆ ಮೊದಲು ಆಗಿರಲಿಲ್ಲ. ಮಮತಾಳ ಮತ್ತು ನನ್ನ ಸ್ನೇಹಿತರ ಕುತೂಹಲ ನಾನು ಈ ಪುಸ್ತಕ ಬರೆಯುವಂತೆ ಪ್ರೇರೇಪಿಸಿತು. ನನ್ನ ಹೃದಯದ ನುಡಿಯನ್ನು ದಾಖಲಿಸಿದ್ದೇನೆ, ನನ್ನ ಅಹಂ ಅನ್ನು ಹೊರಗಿಡಲು ಪ್ರಯತ್ನಿಸಿ. ….
ಮೋಹನ್ ರಂಗ ರಾವ್
ಅನುವಾದಕರ ನುಡಿ
ಮಾನ್ಯ ಮೋಹನ್ ರಂಗ ರಾವ್ ಅವರ ಪರಿಚಯವಾದದ್ದು ನನ್ನ ಶಿಷ್ಯ ನಾಗೇಶ್ ಕಂದೇಗಾಲ ಅವರ ಮೂಲಕ. ನಾಗೇಶ್ ಕಂದೇಗಾಲ ಅವರು ಶ್ರೀ ಮೋಹನ್ ರಂಗ ರಾವ್ ಅವರಿಗೆ ಪ್ರಿಯರಾದವರು ಎಂದು ನನಗೆ ಗೊತ್ತಿರಲಿಲ್ಲ. ಒಂದು ದಿನ ನಾಗೇಶ್ ಬಹಳ ಉತ್ಸಾಹದಲ್ಲಿ ನನ್ನನ್ನ ಕ್ಯಾಂಪಸ್‍ನಲ್ಲಿ ಭೇಟಿಯಾದರು. ಮಾನ್ಯ ಮೋಹನ್ ಅವರು ತಮ್ಮ “INNER TREK” ಎಂಬ ಪ್ರವಾಸಕಥನವನ್ನು ಕನ್ನಡಕ್ಕೆ ತರಬೇಕೆಂದೂ ಅದನ್ನು ಸಮರ್ಥವಾಗಿ ಮಾಡುವವರು ಯಾರು ಎಂದು ಕೇಳಿದಾಗ ನಾಗೇಶ್ ಕೂಡಲೇ “ನಮ್ಮ ಗುರುಗಳು ಪ್ರೊ. ನಾಗಣ್ಣ ಅಂತ ಇದ್ದಾರೆ; ಅವರು ಒಪ್ಪಿದರೆ ನಿಮ್ಮ ಕೆಲಸ ಸಲೀಸು” ಎಂದು ಹೇಳಿದಾಗ ಮೋಹನ್‍ರವರು ನಾಗೇಶ್‍ಗೆ ಹಸಿರು ನಿಶಾನೆ ತೋರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ನಾಗೇಶ್ ನನ್ನನ್ನು ಭೇಟಿಯಾಗಿ ಹಸ್ತಪ್ರತಿಯನ್ನು ನೀಡಿ “ಬೇರೆಲ್ಲ ಕೆಲಸಗಳನ್ನು ಬದಿಗೊತ್ತಿ ಆದ್ಯತೆಯ ಮೇರೆಗೆ ಇದರ ಅನುವಾದ ಕಾರ್ಯವನ್ನು ಸಂಪನ್ನಗೊಳಿಸಿಕೊಡಿ, ಆಡಿಯೋ ಬುಕ್ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡು ಮುಂದುವರಿಯಬೇಕಾಗಿದೆ” ಅಂದರು. ಆ ಕೂಡಲೇ “Iಟಿಟಿeಡಿ ಖಿಡಿeಞ” ಅನ್ನು ಅನುವಾದಿಸುವುದಕ್ಕಾಗಿ …………
ಡಾ. ಸಿ. ನಾಗಣ್ಣ
ಸಂದರ್ಶಕ ಪ್ರಾಧ್ಯಾಪಕರು
ಮೈಸೂರು ವಿಶ್ವವಿದ್ಯಾನಿಲಯ
ಮುನ್ನುಡಿ
ಈ ದರಿದ್ರ ಕೋವಿಡ್‍ನ ಲಾಕ್‍ಡೌನ್ ಸಂದರ್ಭದಲ್ಲಿ ನನ್ನೊಳಗೆ ಸ್ಫುರಿಸಿದ ಕೆಲವು ಮಾತುಗಳಿವೆ –
“ನಿಮಗೆ ಹೊರಗೆ ತಿರುಗಾಡುವುದಕ್ಕೆ ಆಗ್ತಾ ಇಲ್ಲ ಅಲ್ವಾ? ಹಾಗಾದರೆ ಈಗ ನಿಮ್ಮ ಒಳಗೆ ತಿರುಗಾಡಿ!”
“ನಾವು ನಮ್ಮ ಬದುಕಿನಲ್ಲಿ ಯಾರ್ಯಾರನ್ನೋ, ಎಂತೆಂಥಾವರನ್ನೋ ಭೇಟಿ ಆಗ್ತೀವಿ; ಆದರೆ ನಾವು ನಮ್ಮನ್ನೇ ಭೇಟಿ ಆಗಿರುವುದಿಲ್ಲ!” …..
ದಿನಾಂಕ : 15.01.2022 ಪ್ರೀತಿಯಿಂದ,
ಉತ್ತರಾಯಣ ಪುಣ್ಯಕಾಲ ಪ್ರೊ. ಎಂ. ಕೃಷ್ಣೇಗೌಡ
ಮಕರ ಸಂಕ್ರಾಂತಿ ನಿವೃತ್ತ ಪ್ರಾಂಶುಪಾಲರು
ಸಂತ ಫಿಲೋಮಿನಾ ಕಾಲೇಜು,
ಮೈಸೂರು
Reviews
There are no reviews yet.